ಇಕ್ಕೈಬಳಕೆ
ಎರಡು ಕೈಗಳನ್ನೂ ಸಮಾನ ಕೌಶಲದಿಂದ ಬಳಸುವ ಸಾಮಥ್ರ್ಯ (ಆಂಬಿಡೆಕ್ಸ್‍ಟೆರಿಟಿ). ಇದು ಹುಟ್ಟಿನಿಂದಲೇ ಬಂದಿರಬಹುದು ಅಥವಾ ಅಭ್ಯಾಸದಿಂದ ಲಭಿಸಿರಬಹುದು. ಮಹಾತ್ಮ ಗಾಂಧೀಜಿ ಇಕ್ಕೈಬಳಕೆಯನ್ನು ಅಭ್ಯಾಸದಿಂದ ಸಾಧಿಸಿದವರು.												(ಡಿ.ಎಸ್.ಎಸ್.)

ಮಿದುಳಿನ ಒಂದು ಪಾಶ್ರ್ವ (ಸಾಮಾನ್ಯವಾಗಿ ಎಡ) ಎದುರು ಪಾಶ್ರ್ವದ ಮಾತಿನ ಮತ್ತು ಚಲನದ ಶಕ್ತಿಗಳೆರಡನ್ನೂ ನಿಯಂತ್ರಿಸುತ್ತದೆ ಎಂದು ಹೇಳಲಾಗಿದೆ. ಪರಿಣಾಮವಾಗಿ ಒಂದು ಕೈಯ ಸಾಮಥ್ರ್ಯ ಅಧಿಕವಾಗುವುದು ಮತ್ತು ಬಲಚ ಅಥವಾ ಎಡಚ ಎಂಬ ಭಿನ್ನತೆ ಉಂಟಾಗುವುದು. ಮಿದುಳಿನ ಈ ದ್ವಿನಿಯಂತ್ರಣದ ಕಾರಣದಿಂದ ಎಡಚತನ ಬಲಚತನ ಎಂಬ ಭಿನ್ನತೆ ತೀವ್ರಗೊಂಡು ಮಾತಿನಲ್ಲಿ ಕುಂದು ತಲೆದೋರುವ ಸಂಭವವಿದೆ ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಆದರೆ ಕೆಲವು ಶಿಕ್ಷಣವೇತ್ತರು ಇಕ್ಕೈಬಳಕೆಯನ್ನು ಮಕ್ಕಳಲ್ಲಿ ಬೆಳೆಸುವುದರ ಮೂಲಕ ಚಲನೆಯನ್ನು ನಿಯಂತ್ರಿಸುವ ಮಿದುಳಿನ ಕೇಂದ್ರಗಳ ಅಭಿವೃದ್ಧಿ ಮಾಡಬೇಕೆಂದು ವಾದಿಸುತ್ತಾರೆ. (ನೋಡಿ- ಕೈಬಳಕೆ)									
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ